Devarayanadurga

ಪ್ರವಾಸಿಗರನ್ನು ತನ್ನತ್ತ ಸೆಳೆಯುವ, ಸದಾ ಹಚ್ಚ-ಹಸಿರಿನಿಂದ ಕಂಗೊಳಿಸುವ ಬೆಟ್ಟ ಗುಡ್ಡಗಳು.

ಭೂಲೋಕದ ಸ್ವರ್ಗ : ದೇವರಾಯನ ದುರ್ಗ

“ಭೂಮಿಯ ಮೇಲೆಯೇ ಬ್ರಹ್ಮನಿಂದ ಸ್ಥಾಪಿತವಾದ ಮೊದಲ ಲಕ್ಷ್ಮೀನರಸಿಂಹಸ್ವಾಮಿಯ ವಿಗ್ರಹ”

ಬೆಟ್ಟ-ಗುಡ್ಡಗಳಿಂದ ಸದಾ ಹಚ್ಚಹಸಿರಾಗಿ ಕಂಗೊಳಿಸುವ ದೇವರಾಯನ ದುರ್ಗ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಗ್ರಾಮಾಂತರದ ದೇವರಾಯನ ದುರ್ಗದಲ್ಲಿ ಶ್ರೀ ಯೋಗ ನರಸಿಂಹ ಹಾಗೂ ಭೋಗ ನರಸಿಂಹ ಸ್ವಾಮಿ ದೇವಾಲಯಗಳಿದ್ದು, ದೇವಾಲಯಗಳು ಸುಂದರ ಪರಿಸರದ ನಡುವೆ ಸಾಲು ಬೆಟ್ಟಗಳಿಗೆ ಹೊಂದಿಕೊಂಡಿವೆ

ಹಿನ್ನೆಲೆ:

ಒಂದು ದೋಷವನ್ನು ನಿವಾರಿಸಿಕೊಳ್ಳಲು ದುರ್ವಾಸ ಮುನಿಗಳು ನೂರಾರು ವರ್ಷಗಳ ಕಾಲ ತಪಸ್ಸನ್ನು ಮಾಡುತ್ತಾರೆ, ತಪಸ್ಸಿಗೆ ಮೆಚ್ಚಿದ ಲಕ್ಷ್ಮೀನರಸಿಂಹಸ್ವಾಮಿಯು ದುರ್ವಾಸ ಮಹಾಮುನಿಗಳಿಗೆ ಕಾಣಿಸಿಕೊಳ್ಳುತ್ತಾರೆ, ತಾವು ಕಂಡಂತಹ ಸ್ವಾಮಿಯ ರೂಪವನ್ನು ಶಿಲ್ಪಿಯಿಂದ ಕೆತ್ತಿಸಿ ಪ್ರತಿಷ್ಠಾಪಿಸುತ್ತಾರೆ, ಹಾಗೆ ದುರ್ವಾಸ ಮುನಿಗಳಿಂದ ಪ್ರತಿಷ್ಠಾಪನೆಗೊಂಡ ಈ ಸ್ವಾಮಿಯೇ ಭೋಗ ಲಕ್ಷ್ಮೀ ನರಸಿಂಹ ಸ್ವಾಮಿ.

ಭೋಗವನ್ನು ಕರುಣಿಸುವ ಈ ಸ್ವಾಮಿಯ ಸ್ಥಾಪನೆಗೂ ಮುಂಚೆ ಈ ಕ್ಷೇತ್ರದಲ್ಲಿನ “ಕುಂಭಿಬೆಟ್ಟ”ದಲ್ಲಿ ಮೋಕ್ಷವನ್ನು ಕರುಣಿಸುವ ಯೋಗ ನರಸಿಂಹಸ್ವಾಮಿಯ ವಿಸ್ಮಯಕಾರಿ ವಿಗ್ರಹ ಬ್ರಹ್ಮನಿಂದ ಸ್ಥಾಪನೆಗೊಂಡಿತು. ಲೋಕಕಲ್ಯಾಣಕ್ಕಾಗಿ ಭೂಮಿಯಲ್ಲಿ ನೆಲೆಯಾಗಬೇಕೆಂದು ಆದಿಕೃತಯುಗದಲ್ಲಿ ಬ್ರಹ್ಮದೇವನು ನರಸಿಂಹಸ್ವಾಮಿ ಯನ್ನು ಕುರಿತು ಸಾವಿರಾರು ವರ್ಷಗಳ ಕಾಲ ತಪಸ್ಸನ್ನು ಮಾಡಿದರು, ಯಜ್ಞ-ಯಾಗಾದಿಗಳನ್ನೂ ಕೂಡ ಮಾಡಿದರು, ಅಂತಹ ಸಮಯದಲ್ಲಿ ಯಜ್ಞಕುಂಡದಲ್ಲಿ ಉದ್ದವಾಗಿದ್ದೇ ಈ ಯೋಗ ನರಸಿಂಹ ಸ್ವಾಮಿ ವಿಗ್ರಹ. ಹಾಗೆ ವಿಸ್ಮಯಕಾರಿ ವಿಗ್ರಹದ ಮೂಲಕ ಭೂಮಿಗೆ ಬಂದ ಯೋಗ ನರಸಿಂಹಸ್ವಾಮಿಯ ಪಾದವನ್ನು ತೊಳೆಯಲು ಮುಂದಾದಾಗ ಒಂದು ಅಚ್ಚರಿ ನಡೆಯಿತು , ಅಚ್ಚರಿಯೇ ಪಾದವನ್ನು ತೊಳೆದ ನೀರು ಎಲ್ಲಿ ಹರಿಯಿತೋ ಅಲ್ಲಿ ಗುಹೆ ನಿರ್ಮಾಣವಾದದ್ದು, ಗುಹೆಯಲ್ಲಿ ಒಂದು ವಿಸ್ಮಯಕಾರಿ ಕಲ್ಯಾಣಿ ನಿರ್ಮಾಣವಾಗಿದ್ದು, ಅದುವೇ ಪಾದ ತೀರ್ಥವೆಂಬ ಗುಹಾಂತರ್ಗತ ಪುಷ್ಕರಣಿ.

ಬ್ರಹ್ಮನಿಂದ ಪ್ರತಿಷ್ಠಾಪಿಸಲಾಗಿರುವ ದೇವರಾಯನದುರ್ಗದ ಕುಂಬಿ ಬೆಟ್ಟದ ಮೇಲೆ ನೆಲೆಯೂರಿರೋ ಈ ಯೋಗ ನರಸಿಂಹಸ್ವಾಮಿಯ ವಿಗ್ರಹವೇ ಭೂಮಿಯ ಮೇಲೆ ಸ್ಥಾಪಿತವಾದ ಮೊದಲ ಲಕ್ಷ್ಮೀನರಸಿಂಹಸ್ವಾಮಿಯ ವಿಗ್ರಹ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ.

ಶ್ರೀ ಭೋಗ ನರಸಿಂಹನ ದೇವಾಲಯಕ್ಕೆ ಪೂರ್ವದಿಕ್ಕಿನಲ್ಲಿ ಬಂಗಲೆ ಬೆಟ್ಟವಿದೆ. ಇಲ್ಲಿ ರಾಮದೇವರ ಗುಹೆ, ಮತ್ತು ಬಿಲ್ದೂಣೆ, ರಾಮತೀರ್ಥಗಳೆಂಬ ಪುಷ್ಕರಣಿಗಳೂ ಇವೆ. ಪಕ್ಕದಲ್ಲೇ ಕುಂಬಿ ಬೆಟ್ಟವಿದೆ. ಇದೇ ಪ್ರಧಾನವಾದದ್ದು.

ದೇವರಾಯನದುರ್ಗಕ್ಕೆ ಮತ್ತೊಂದು ಹೆಸರಿದ್ದು ಕರಿಗಿರಿ ಕ್ಷೇತ್ರವೆಂದೇ ಪ್ರಸಿದ್ಧಿಯಾಗಿದೆ. ಈ ಪುಣ್ಯಕ್ಷೇತ್ರ ವನ್ನು ಯಾವ ಕಡೆ ನೋಡಿದರೂ ಸುತ್ತಲೂ ಇರುವ ಅರಣ್ಯ ಹಾಗೂ ಬೆಟ್ಟಗುಡ್ಡಗಳು ದಟ್ಟವಾದ ಹಸಿರಿನಿಂದ ಕಂಗೊಳಿಸುತ್ತಿವೆ.

ನೋಡಬಹುದಾದ ಸ್ಥಳಗಳು :
1. ಶಿಂಷಾ ಮತ್ತು ಜಯಮಂಗಲಿ ನದಿಗಳ ಉಗಮಸ್ಥಾನ .
2. ಪ್ರಹಲ್ಲಾದ-ವ್ಯಾಸರಾಜ-ರಾಘವೇಂದ್ರ ಸ್ವಾಮಿಗಳ ಮಠ.
3. ಸಂಜೀವರಾಯಪ್ಪನ ದೇವಾಲಯ.
4. Hill point view
5. Sunset point
6. Fort view point
7. ಆಂಜನೇಯ ಗರುಡ ದೇವಸ್ಥಾನ.
8. ಶ್ರೀ ಪಾದತೀರ್ಥ ಗುಹೆ
9. ಶ್ರೀಪಾದ ತೀರ್ಥ ಕೊಳ
10. ವೀರಾಂಜನೇಯ ದೇವಸ್ಥಾನ

ಒಂದು ದಿನದ ಪ್ರವಾಸಕ್ಕೆ ಸೂಕ್ತ ಸ್ಥಳ

ಇದು ಪರಿಸರ ಪ್ರೇಮಿಗಳ ಸ್ವರ್ಗ, ವನ್ಯಜೀವಿಗಳ ಆಗರ, ಮನಮೋಹಕ ಪರಿಸರ. ಕಾನನದ ಮಧ್ಯೆ ಹಾದು ಹೋಗಿ ಪ್ರಕೃತಿ ಸೊಬಗು ಸವಿಯಬೇಕೆಂದರೆ ಒಮ್ಮೆ ತುಮಕೂರು ಜಿಲ್ಲೆಯ ದೇವರಾಯನದುರ್ಗಕ್ಕೆ ಪ್ರಯಾಣ ಬೆಳೆಸಬೇಕು. ಬಯಲುಸೀಮೆಯ ಬಿಸಿಯ ತಾಪದಲ್ಲಿಯೂ ಹಚ್ಚಹಸಿರಿನ ಸೌಂದರ್ಯ, ಸ್ನೇಹಿತರೊಂದಿಗೆ ಒಂದು ದಿನ ಪ್ರವಾಸಕ್ಕೆ ಮತ್ತು ಬೈಕ್ ರೈಡಿಂಗ್ ಗೆ ಸೂಕ್ತ ಜಾಗ. ಕುಟುಂಬ ಸಮೇತ ಒಂದು ದಿನದ ಪಿಕ್ ನಿಕ್ ಗೆ ಹೇಳಿಮಾಡಿಸಿದ ಪರಿಸರ.

ಇನ್ನೂ ಮಳೆಗಾಲದ ಮುಂಜಾನೆಯ ವೇಳೆ ತುಂತುರು ಮಳೆ ಬೀಳುವ ಸಮಯದಲ್ಲಿ ದಟ್ಟವಾಗಿ ಬೆಳೆದಿರುವ ಮರಗಿಡಗಳ ಮಧ್ಯೆ ಚಿಂವ್‌ ಗುಡುವ ಪಕ್ಷಿಗಳ ಚಿಲಿಪಿಲಿ ಕೇಳುತ್ತಾ… ಆ ಇಬ್ಬನಿ ಕವಿದಿರುವ ರಸ್ತೆಯಲ್ಲಿ ಪ್ರಯಾಣ ಮಾಡುತ್ತಾ.. ಪ್ರಕೃತಿಯ ಸೊಬಗನ್ನು ಸವಿಯುತ್ತಾ.. ಹೋದರೆ ಆಗುಂಬೆ… ಕೊಡೈಕೆನಾಲ್ ನಂತಹ ಸ್ಥಳಗಳಿಗಿಂತ ಏನು ಕಡಿಮೆ ಇಲ್ಲ. ಈ ನಮ್ಮ ದೇವರಾಯನದುರ್ಗದ ರಮಣೀಯ ನೋಟ.

Gallery

Map view

Enter street adress here. Or any other information you want.

video

Related Places

Leave a Reply

Your email address will not be published. Required fields are marked *