ಸುಪ್ರಸಿದ್ದ ಕೋಟೆ ಆಂಜನೇಯನ ಸನ್ನಿಧಿ

ಕಣ್ಮನ ಸೆಳೆಯುವ 75 ಅಡಿ ಎತ್ತರದ ಹನುಮಾನ್ ಪ್ರತಿಮೆ

ಕೋಟೆ ಆಂಜನೇಯ ದೇವಾಲಯವು ಕರ್ನಾಟಕದ ತುಮಕೂರಿನಲ್ಲಿರುವ ಪ್ರಸಿದ್ದವಾದ ಹನುಮನ ದೇವಾಲಯವಾಗಿದೆ. ದಕ್ಷಿಣಾಭಿಮುಖಿ ಕೋಟೆ ಆಂಜನೇಯ ದೇವಾಲಯವು ಭವ್ಯವಾಗಿದ್ದು ಇದನ್ನು 1984ರಲ್ಲಿ ನವೀಕರಿಸಲಾಗಿದೆ. ಆದರೂ ಹಲವಾರು ಭಾಗಗಳಲ್ಲಿ ಪ್ರಾಚೀನತೆಯನ್ನು ಗುರುತಿಸಬಹುದಾಗಿದೆ. ಒಳಾಂಗಣವನ್ನು ಗಮನಿಸಿದರೆ ಬಿಂಬಕ್ಕೆ ತಕ್ಕಂತೆ ಎತ್ತರವಾದ ಗರ್ಭಗೃಹ ಹಾಗೂ ವಿಶಾಲವಾದ ಹಜಾರವಿದೆ. ಗರ್ಭಗೃಹದ ದ್ವಾರವು ಚಿತ್ತಾರವನ್ನೂಳಗೊಂಡಿದ್ದು, ಭಿತ್ತಿಯಜಾಲಂದ್ರ, ಪ್ರದಕ್ಷಿಣಾಪಥಗಳು ಅಪರೂಪದ ರಚನೆಗಳಾಗಿವೆ. ಗರ್ಭಗೃಹದಲ್ಲಿ ನಾಲ್ಕು ಅಡಿ ಎತ್ತರದ ಆಂಜನೇಯ ಶಿಲ್ಪವಿದೆ.
ಗರ್ಭಗೃಹದ ಮುಂದೆ ವಿಶಾಲವಾದ ಹಜಾರ ವಿದ್ದು, ದ್ವಾರದ ಪಕ್ಕದಲ್ಲಿ ಒಳ ಭಿತ್ತಿಗಳಲ್ಲಿ ಕೋಷ್ಟಕವನ್ನು ರಚಿಸಿ, ಆಂಜನೇಯನಲೀಲಾ ರೂಪಗಳಾದ, ರಾಮನಿಗೆ ಎದೆ ಬಗೆದು ತನ್ನ ಭಕ್ತಿ ತೋರಿಸುವ ಆಂಜನೇಯ, ಗಂಧಮಾಧವ ಪರ್ವತವನ್ನೇರುವ, ಪಟ್ಟಾಭಿರಾಮ ಮೊದಲಾದವುಗಳನ್ನು ರೂಪಿಸಲಾಗಿದೆ. ನವರಂಗದ ಮುಂದೆ ಎತ್ತರವಾದ ಗೋಪುರವಿದೆ. ಈ ಗೋಪುರವು ಹಳೆಯ ರಚನೆಗಿಂತ ಭಿನ್ನವಾಗಿದ್ದು. ಸಮೀಪದಲ್ಲಿಯೇ ದೀಪಸ್ತಂಭವಿದೆ. ದೇವಾಲಯದ ಸುತ್ತಲೂಕೈಪಿಡಿ ಗೋಡೆಯಿದ್ದು, ಪ್ರಭಾವಳಿಯ ಗೋಪುರಗಳಲ್ಲಿ ಆಂಜನೇಯನ ವಿವಿಧ ಲೀಲೆಗಳನ್ನು ತೋರಿಸಲಾಗಿದೆ.
ಈ ದೇವಾಲಯದ ಪ್ರವೇಶದ್ವಾರದಲ್ಲಿ 75 ಅಡಿ ಎತ್ತರದ ಹನುಮಾನ್ ಪ್ರತಿಮೆಯನ್ನು ಹೊಂದಿದೆ, ಇದನ್ನು ಮೇ 2005 ರಲ್ಲಿ ಉದ್ಘಾಟಿಸಲಾಯಿತು.
ಈ ಪ್ರತಿಮೆಯಹಿಂಬಾಗದಲ್ಲಿ ಶ್ರೀ ಪಂಚಮುಖಿ ಮಹಾ ಗಣಪತಿ ಸನ್ನಿಧಿ ಹಾಗೂ ನವಗ್ರಹಗಳ ದೇವಾಲಯವಿದೆ,

ಕೋಟೆ ಅಂಜನೇಯ ವಿಗ್ರಹವು ಶ್ರೀ ವ್ಯಾಸರಾಜರ ಹನುಮನ ಪವಿತ್ರ ವಿಗ್ರಹಗಳಲ್ಲಿ ಒಂದಾಗಿದೆ. ಶ್ರೀ ವ್ಯಾಸರಾಜರು ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ರಾಜಗುರು. ಇವರು “ಕನಕದಾಸ ಮತ್ತು ಪುರಂದರದಾಸರ” ಗುರುಗಳೂ ಆಗಿದ್ದರು. 500 ವರ್ಷಗಳ ಹಿಂದೆ ಶ್ರೀ ವ್ಯಾಸರಾಜರು ಭಾರತದಾದ್ಯಂತ 732 ಹನುಮನ ವಿಗ್ರಹಗಳನ್ನು ಪವಿತ್ರಗೊಳಿಸಿದರು.

Gallery

Map view

Related Places

Leave a Reply

Your email address will not be published. Required fields are marked *

×