ತುಮಕೂರು : ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ಹಾಗೂ ಸಂಸ್ಕೃತಿ ಇಲಾಖೆ, ಭಾರತ ಸರ್ಕಾರದ ವತಿಯಿಂದ ನವೆಂಬರ್ 22 ರಂದು ಶುಕ್ರವಾರ ಬೆಳಿಗ್ಗೆ 10.30 ಕ್ಕೆ ಜಾನಪದ ಜಾತ್ರೆಯನ್ನು ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಾನಪದ ಜಾತ್ರೆಯಲ್ಲಿ ನಂದಿಧ್ವಜ ಕುಣಿತ, ವೀರಗಾಸೆ, ಚಿಟ್ಟಿಮೇಳ, ಪೂಜಾಕುಣಿತ, ಮಹಿಳಾ ಡೊಳ್ಳುಕುಣಿತ, ಲಂಬಾಣಿ ನೃತ್ಯ, ಗಾರುಡಿ ಗೊಂಬೆ ಸೋಮನ ಕುಣಿತ, ಕೀಲುಕುದುರೆ ಕಲಾ ಪ್ರದರ್ಶನ ನಡೆಯಲಿದೆ.