ನ.18 ರಂದು ಉದ್ಯೋಗಕ್ಕಾಗಿ ನೇರ ಸಂದರ್ಶನ

ತುಮಕೂರು:‌ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಿರುದ್ಯೋಗ ಪುರುಷ / ಮಹಿಳೆಯರಿಗೆ ಉದ್ಯೋಗ ನೀಡಲು ನವೆಂಬರ್ 18 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಆವರಣ ಡಿಸಿಸಿ ಬ್ಯಾಂಕ್ ಎದುರು, ಚರ್ಚ್ ಸರ್ಕಲ್ ಹತ್ತಿರ ಸಂದರ್ಶನ ನಡೆಯಲಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯ ಉದ್ಯೋಗಾಧಿಕಾರಿ ಎಂ,ಆರ್,ಗೋವಿಂದರಾಜು ತಿಳಿಸಿದ್ದಾರೆ.
ಎಸ್. ಎಸ್. ಎಲ್ಸಿ. ಐಟಿಐ, ಡಿಪ್ಲೋಮಾ ಹಾಗೂ ಯಾವುದೇ ಪದವಿ ಪಡೆದು ಪಾಸಾದ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದ್ದು, ಅರ್ಹ ಅಭ್ಯರ್ಥಿಗಳು ಬಯೋಡೇಟಾ ಹಾಗೂ ಶಾಲಾ ದಾಖಲಾತಿಗಳೊಂದಿಗೆ ಸಂದರ್ಶ ನಕ್ಕೆ ಹಾಜರಾಗಬೆಕಿದೆ. ಮಾಹಿತಿಗಾಗಿ ದೂ. ಸಂ. 0816-2278488, 9353488925 ಇಲ್ಲಿಗೆ ಸಂಪರ್ಕಿಸಬಹುದು.

Leave a Reply

Your email address will not be published. Required fields are marked *

×