ಯಶವಂತಪುರ – ತುಮಕೂರು – ಯಶವಂತಪುರ ನಡುವೆ ಸಂಚಾರ,
ಸೆ.30 ರಂದು ಡೆಮು ರೈಲು ಸಂಚಾರ ಆರಂಭಗೊಳ್ಳಲಿದೆ.
ವಾರದ 6 ದಿನ ರಾತ್ರಿ 7.50ಕ್ಕೆ ಯಶವಂತಪುರದಿಂದ ಹೊರಟು 9.30ಕ್ಕೆ ತುಮಕೂರು ತಲುಪಲಿದೆ ಮತ್ತೆ ರಾತ್ರಿ 9.50ಕ್ಕೆ ಹೊರಟು 11:30 ಕ್ಕೆ ಯಶವಂತಪುರ ತಲುಪಲಿದೆ.
ರಾತ್ರಿ 8.20ರ ನಂತರ ತುಮಕೂರಿನಿಂದ ಬೆಂಗಳೂರಿಗೆ ರೈಲುಗಳು ಇರಲಿಲ್ಲ. ಈಗ ಡೆಮು ರೈಲು ಸಂಚಾರ ಆರಂಭದಿಂದ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಅದೇ ರೀತಿ ಸಂಜೆ 6.20ರ ನಂತರ ಪ್ಯಾಸೆಂಜರ್ ರೈಲಿನ ವ್ಯವಸ್ಥೆಯಾಗದೆ ಯಶವಂಪುರ ತುಮಕೂರು ನಡುವಿನ ಗ್ರಾಮಗಳ ಪ್ರಯಾಣುಕರಿಗೆ ತೀವ್ರ ತೊಂದರೆಯಾಗಿತ್ತು. ಡೆಮು ರೈಲು ಸಂಚಾರ ಆರಂಭದಿಂದ ಆ ಭಾಗದ ಗ್ರಾಮಗಳ ಜನರಿಗೆ ತುಂಬಾ ಅನುಕೂಲವಾಗಲಿದೆ.