ತುಮಕೂರು : ಕೌಶಲ್ಯ ಅಭಿವೃಧ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಹಯೋಗದಲ್ಲಿ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಕೌಶಲ್ಯ ಅಭಿವೃಧ್ದಿ ಕಾರ್ಯಕ್ರಮದಡಿ ನಿರುದ್ಯೋಗ ಯುವಕ / ಯುವತಿಯರಿಗೆ ಉಚಿತ ಕೌಶಲ್ಯ ತರಬೇತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ತರಬೇತಿ ಕೇಂದ್ರದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತರಬೇತಿಗಳು ಎಸ್ಎಸ್ಎಲ್ಸಿ ಪಾಸ್ ಅಥವಾ ಫೇಲ್ ಆದವರಿಗೆ ಒಂದು ವರ್ಷ ಕಾಲಾವಧಿಯ ಟೂಲ್ರೂಂ ಮೆಷಿನಿಷ್ಟ್ ತರಬೇತಿ,
ಎಸ್ಎಸ್ಎಲ್ಸಿ / ಐಟಿಐ / ಡಿಪ್ಲಮೊ / ಬಿಇ ಪೂರ್ಣಗೊಳಿಸಿ ದವರಿಗೆ 2 ತಿಂಗಳ ಕಾಲಾವಧಿಯ ಸಿಎನ್ ಸಿ ಟೆಕ್ನಾಲಜಿಸ್ಟ್ ತರಬೇತಿ,
ಐಟಿಐ / ಡಿಪ್ಲೊಮೊ / ಬಿಇ ಪಾಸ್ ಅಥವಾ ಫೇಲ್ ಆದವರಿಗೆ ಎರಡು ತಿಂಗಳ ಕಾಲಾವಧಿಯ ಸಿಎನ್ ಸಿ ಪ್ರೋಗ್ರಾಂ ಅಂಡ್ಆಪರೆಷನ್, ಟರ್ನರ್ / ಮಿಲ್ಲರ್ / ಗ್ರೈಂಡರ್, ಕ್ಯಾಡ್ / ಕ್ಯಾಮ್, ಯುಎನ್ಐ ಗ್ರಾಫಿಕ್ಸ್, ಸಾಲಿಡ್ವರ್ಕ್, ಸಿಎನ್ಸಿ ಮೆಷಿನ್ ಪ್ರೋಗ್ರಾಂ, ಮೆಟ್ರಾಲಜಿ ಮೆಷರ್ ಮೆಂಟ್ ಕೋರ್ಸ್ ಗಳಿಗೆ ತರಬೇತಿಯನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ಪ್ರಾಂಶುಪಾಲರು, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ತುಮಕೂರು
ದೂ.ಸಂ.- 0816-2243396 / 9141630322 ನ್ನು ಸಂಪರ್ಕಿಸಬಹುದು