ತುಮಕೂರು: ನಗರದ ಸಪ್ತಗಿರಿ ಪದವಿಪೂರ್ವ ಕಾಲೇಜಿನಲ್ಲಿ ನ. 16 ಮತ್ತು 17ರಂದು ರೊಬೊಟ್, ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರದರ್ಶನ ಏರ್ಪಡಿಸಲಾಗಿದೆ.
ಸಿದ್ಧಗಂಗಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್.ಆನಂದಕುಮಾರಿ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ. ಸಪ್ತಗಿರಿ ಸಂಸ್ಥೆಯ ಅಧ್ಯಕ್ಷ ಡಿ.ಎಸ್.ಕುಮಾರ್, ಪ್ರಾಂಶುಪಾಲ ಡಾ.ಎಚ್.ಎಸ್.ನಿರಂಜನಾರಾಧ್ಯ ಉಪಸ್ಥಿತರಿರುವರು. ಬೆಳಿಗ್ಗೆ 9ರಿಂದ ಪ್ರಾರಂಭವಾಗುವ ವಸ್ತು ಪ್ರದರ್ಶನವು ಸಂಜೆ 5ರವರೆಗೆ ತೆರೆದಿರುತ್ತದೆ.
ಆಸಕ್ತ ಪ್ರೌಢಶಾಲಾ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ವೀಕ್ಷಿಸಬಹುದು. ಮಾಹಿತಿಗೆ: 89511 10110.