Author Archives: tumakuru life

Devarayanadurga

ಪ್ರವಾಸಿಗರನ್ನು ತನ್ನತ್ತ ಸೆಳೆಯುವ, ಸದಾ ಹಚ್ಚ-ಹಸಿರಿನಿಂದ ಕಂಗೊಳಿಸುವ ಬೆಟ್ಟ ಗುಡ್ಡಗಳು. ಭೂಲೋಕದ ಸ್ವರ್ಗ : ದೇವರಾಯನ ದುರ್ಗ “ಭೂಮಿಯ ಮೇಲೆಯೇ ಬ್ರಹ್ಮನಿಂದ ಸ್ಥಾಪಿತವಾದ ಮೊದಲ ಲಕ್ಷ್ಮೀನರಸಿಂಹಸ್ವಾಮಿಯ ವಿಗ್ರಹ” ಬೆಟ್ಟ-ಗುಡ್ಡಗಳಿಂದ ಸದಾ ಹಚ್ಚಹಸಿರಾಗಿ ಕಂಗೊಳಿಸುವ ದೇವರಾಯನ ದುರ್ಗ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಗ್ರಾಮಾಂತರದ ದೇವರಾಯನ ದುರ್ಗದಲ್ಲಿ ಶ್ರೀ ಯೋಗ ನರಸಿಂಹ ಹಾಗೂ ಭೋಗ ನರಸಿಂಹ ಸ್ವಾಮಿ ದೇವಾಲಯಗಳಿದ್ದು, ದೇವಾಲಯಗಳು ಸುಂದರ ಪರಿಸರದ ನಡುವೆ ಸಾಲು ಬೆಟ್ಟಗಳಿಗೆ ಹೊಂದಿಕೊಂಡಿವೆ ಹಿನ್ನೆಲೆ: ಒಂದು ದೋಷವನ್ನು ನಿವಾರಿಸಿಕೊಳ್ಳಲು ದುರ್ವಾಸ ಮುನಿಗಳು […]

ಸುಪ್ರಸಿದ್ದ ಕೋಟೆ ಆಂಜನೇಯನ ಸನ್ನಿಧಿ

ಕಣ್ಮನ ಸೆಳೆಯುವ 75 ಅಡಿ ಎತ್ತರದ ಹನುಮಾನ್ ಪ್ರತಿಮೆ ಕೋಟೆ ಆಂಜನೇಯ ದೇವಾಲಯವು ಕರ್ನಾಟಕದ ತುಮಕೂರಿನಲ್ಲಿರುವ ಪ್ರಸಿದ್ದವಾದ ಹನುಮನ ದೇವಾಲಯವಾಗಿದೆ. ದಕ್ಷಿಣಾಭಿಮುಖಿ ಕೋಟೆ ಆಂಜನೇಯ ದೇವಾಲಯವು ಭವ್ಯವಾಗಿದ್ದು ಇದನ್ನು 1984ರಲ್ಲಿ ನವೀಕರಿಸಲಾಗಿದೆ. ಆದರೂ ಹಲವಾರು ಭಾಗಗಳಲ್ಲಿ ಪ್ರಾಚೀನತೆಯನ್ನು ಗುರುತಿಸಬಹುದಾಗಿದೆ. ಒಳಾಂಗಣವನ್ನು ಗಮನಿಸಿದರೆ ಬಿಂಬಕ್ಕೆ ತಕ್ಕಂತೆ ಎತ್ತರವಾದ ಗರ್ಭಗೃಹ ಹಾಗೂ ವಿಶಾಲವಾದ ಹಜಾರವಿದೆ. ಗರ್ಭಗೃಹದ ದ್ವಾರವು ಚಿತ್ತಾರವನ್ನೂಳಗೊಂಡಿದ್ದು, ಭಿತ್ತಿಯಜಾಲಂದ್ರ, ಪ್ರದಕ್ಷಿಣಾಪಥಗಳು ಅಪರೂಪದ ರಚನೆಗಳಾಗಿವೆ. ಗರ್ಭಗೃಹದಲ್ಲಿ ನಾಲ್ಕು ಅಡಿ ಎತ್ತರದ ಆಂಜನೇಯ ಶಿಲ್ಪವಿದೆ. ಗರ್ಭಗೃಹದ ಮುಂದೆ ವಿಶಾಲವಾದ ಹಜಾರ ವಿದ್ದು, […]

ಮಧುಗಿರಿಯ ಏಕಶಿಲಾ ಬೆಟ್ಟ

ವಿಶ್ವ ವಿಖ್ಯಾತ ಮಧುಗಿರಿ ಬೆಟ್ಟ ತುಮಕೂರು ಜಿಲ್ಲೆಯ ಹೆಮ್ಮೆಯ ಪ್ರತೀಕ. ಮಧುಗಿರಿ ಏಕಶಿಲಾ ಬೆಟ್ಟ ಪ್ರಪಂಚದ ಎರಡನೆಯ ಹಾಗೂ ಏಷ್ಯಾ ಖಂಡದ ಏಕಾಗ್ರ ಶಿಲೆಯ (ಮನೋಲಿಥಿಕ್) ಬೆಟ್ಟವೆಂದು ಗಿನ್ನಿಸ್ ಪುಸ್ತಕದಲ್ಲಿ ದಾಖಲೆಯಾಗಿದೆ, ಮಧುಗಿರಿಯ ಕೆರೆ, ಕಾಲುವೆ ಮತ್ತು ದೇವಾಲಯಗಳಿಂದ ಕೂಡಿದ ನಾಡಾಗಿದ್ದು ಸದಾ ರಮಣೀಯವಾದ ನಿಸರ್ಗದ ಚೆಲುವನ್ನು ಹೊತ್ತುಕೊಂಡಿರುವ ಪರಮಪಾವನವಾದ ಕ್ಷೇತ್ರ ಇದಾಗಿದೆ. “ಮದ್ದ ಗಿರಿ” ಎಂಬ ಹೆಸರು 20ನೇ ಶತಮಾನದ ಆದಿಭಾಗದವರೆಗೂ ಬಳಕೆಯಲ್ಲಿತ್ತು ಎಂದು ಹಲವು ಇತಿಹಾಸಕಾರರು ಬಣ್ಣಿಸಿದ್ದಾರೆ. ನಂತರ 1926ರಲ್ಲಿ ಹಿಂದೆ ಏಕಶಿಲಾ ಬೆಟ್ಟದ […]

ಎಡೆಯೂರು: 26ರಂದು ದೀಪೋತ್ಸವ

ತುಮಕೂರು: ಕುಣಿಗಲ್ ತಾಲ್ಲೂಕು ಎಡೆಯೂರು ಶ್ರೀ ಸಿದ್ದಲಿಂಗೇಶ್ವರಸ್ವಾಮಿ ಕ್ಷೇತ್ರದಲ್ಲಿ ಕಾರ್ತಿಕ ಮಾಸದ ಅಮಾವಾಸ್ಯೆ ನ.26 ರಂದು ಸಂಜೆ 5.30ಕ್ಕೆ ಶ್ರೀ ಸಿದ್ದಲಿಂಗೇಶ್ವರಸ್ವಾಮಿಯವರಿಗೆ ಲಕ್ಷ ದೀಪೋತ್ಸವ ವಿಶೇಷ ಸೇವೆ ಹಾಗೂ ರಾತ್ರಿ ಬೆಳ್ಳಿ ಪಲ್ಲಕ್ಕಿ ಉತ್ಸವ ಏರ್ಪಡಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.

ಹೈಟೆಕ್ ಬಸ್‌ ನಿಲ್ದಾಣ

ನ. 25ರಂದು ಬಸ್‌ ನಿಲ್ದಾಣ ತೆರವು; ಜೆ.ಸಿ.ರಸ್ತೆಯಲ್ಲಿರುವ ಕೆಎಸ್‌ಆರ್‌ಟಿಸಿ ಘಟಕ- 1ಕ್ಕೆ ಸ್ಥಳಾಂತರ ತಲೆ ಎತ್ತಲಿದೆ ‘ಹೈಟೆಕ್’ ಬಸ್‌ ನಿಲ್ದಾಣ ತುಮಕೂರು: ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದಲ್ಲಿ ಬಹುಮಹಡಿಯ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಾಣಗೊಳ್ಳಲಿದೆ. ತುಮಕೂರಿಗರ ಬಹುದಿನದ ಬೇಡಿಕೆ ಇನ್ನೆರಡು ವರ್ಷದಲ್ಲಿ ಈಡೇರಲಿದೆ. ತುಮಕೂರು ಬಸ್‌ ನಿಲ್ದಾಣದಿಂದ ರಾಜ್ಯದ ವಿವಿಧೆಡೆಗೆ ನಿತ್ಯ ಸುಮಾರು 2,992 ಬಸ್‌ಗಳು ಹೊರಡುತ್ತವೆ. (ನಗರ ಸಾರಿಗೆ, ಸಾಮಾನ್ಯ ಸಾರಿಗೆ ಹಾಗೂ ವೇಗದೂತ ಸಾರಿಗೆಗಳು ಸೇರಿ). ರಾಜ್ಯದ ಬಹುತೇಕ ಜಿಲ್ಲೆಗಳಿಗೂ ಈ ನಿಲ್ದಾಣ ಸಂಪರ್ಕ ಕೊಂಡಿಯಂತಿದೆ. […]

ನ. 22ರಂದು ಜಾನಪದ ಜಾತ್ರೆ

ತುಮಕೂರು : ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ಹಾಗೂ ಸಂಸ್ಕೃತಿ ಇಲಾಖೆ, ಭಾರತ ಸರ್ಕಾರದ ವತಿಯಿಂದ ನವೆಂಬರ್ 22 ರಂದು ಶುಕ್ರವಾರ ಬೆಳಿಗ್ಗೆ 10.30 ಕ್ಕೆ ಜಾನಪದ ಜಾತ್ರೆಯನ್ನು ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಜಾನಪದ ಜಾತ್ರೆಯಲ್ಲಿ ನಂದಿಧ್ವಜ ಕುಣಿತ, ವೀರಗಾಸೆ, ಚಿಟ್ಟಿಮೇಳ, ಪೂಜಾಕುಣಿತ, ಮಹಿಳಾ ಡೊಳ್ಳುಕುಣಿತ, ಲಂಬಾಣಿ ನೃತ್ಯ, ಗಾರುಡಿ ಗೊಂಬೆ ಸೋಮನ ಕುಣಿತ, ಕೀಲುಕುದುರೆ ಕಲಾ ಪ್ರದರ್ಶನ ನಡೆಯಲಿದೆ.

ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ತುಮಕೂರು: ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಮೆಟ್ರಿಕ್ ನಂತರದ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಅರ್ಹರಿಂದ ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಜಿಯನ್ನು ವಿದ್ಯಾರ್ಥಿವೇತನದ ಪೋರ್ಟಲ್ (ಎಸ್‍ಎಸ್‍ಪಿ) http://ssp.karnataka.gov.in ಮೂಲಕ ನ.30ರೊಳಗಾಗಿ ಸಲ್ಲಿಸಬಹುದು. ಅರ್ಜಿಯೊಂದಿಗೆ ವಿದ್ಯಾರ್ಥಿಯ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಐಎಫ್‍ಎಸ್‍ಸಿ ಕೋಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ, ವಿದ್ಯಾರ್ಹತೆಗೆ ಸಂಬಂಧಿಸಿದ ಕಳೆದ ಸಾಲಿನ ಅಂಕಪಟ್ಟಿ ಹಾಗೂ ಪ್ರಸಕ್ತ ಸಾಲಿನಲ್ಲಿ ಓದುತ್ತಿರುವ ಮಾಹಿತಿ ಸಲ್ಲಿಸಬೇಕು. ಮಾಹಿತಿಗೆ […]

ನಾಳೆಯಿಂದ ಹೈನುಗಾರಿಕೆ ಕುರಿತು ತರಬೇತಿ

ತುಮಕೂರು; ಪಶುವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ, ಜಿಲ್ಲಾ ಪಶು ಆಸ್ಪತ್ರೆ ಆವರಣ, ಕುಣಿಗಲ್ ರಸ್ತೆ, ತುಮಕೂರು ಇಲ್ಲಿ ಎಲ್ಲಾ ವಯೋ ಮಿತಿಯ ಆಸಕ್ತ ರೈತರು ಮತ್ತು ಸಾರ್ವಜನಿಕರಿಗೆ ಹೈನುಗಾರಿಕೆ ಬಗ್ಗೆ ಮೂರು ದಿನಗಳ ಉಚಿತ ತರಬೇತಿಯನ್ನು ನವೆಂಬರ್ 19 ರಿಂದ 21 ರವರೆಗೆ ನೀಡಲಾಗುವುದು .ನವೆಂಬರ್ 19 ರಂದು ಬೆಳಗ್ಗೆ 10.30 ಗಂಟೆಗೆ ತರಬೇತಿಗೆ ನೊಂದಣಿ ಮಾಡಲಾಗಿ ತಿಳಿಸಲಾಗಿದೆ.

×